ತಿಮ್ಮೇಗೌಡ ಸತೀಶ್ ಜವರೇಗೌಡ, ಕನ್ನಡ ಭಾಷೆಯ ಪರಿಚಿತ ಕವಿ ಮತ್ತು ಸಂಘಟಕ. ವೃತ್ತಿಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಲೇ, ಸಾಹಿತ್ಯಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವ ಸತೀಶರು, ಹಲವಾರು ಕವನಸಂಕಲನಗಳನ್ನು ಪ್ರಕಟಿಸಿದ್ದಾರೆ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳ ಕವಿಗೋಷ್ಠಿಗಳಲ್ಲಿ ಮತ್ತು ದಸರಾ ಕವಿಗೋಷ್ಠಿಗಳಲ್ಲಿ ಕವನಗಳನ್ನು ವಾಚಿಸಿರುವ ಸತೀಶ್ ಅವರು ಕನ್ನಡ ಪುಸ್ತಕ ಪ್ರಾಧಿಕಾರದ ಬಹುಮಾನ ಪಡೆದಿದ್ದಾರೆ. == ಜೀವನ - ಶಿಕ್ಷಣ == ಮಂಡ್ಯ ತಾಲೂಕಿನ ಮಂಗಲ ಗ್ರಾಮದಲ್ಲಿ, ತಿಮ್ಮೇಗೌಡ ಮತ್ತು ಮಂಚಮ್ಮ ದಂಪತಿಗಳ ಮಗನಾಗಿ ಹುಟ್ಟಿದ ಸತೀಶ್ ಅವರು ಸ್ನಾತಕೋತ್ತರ ಪದವೀಧರ. ಶಾಲಾಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಇವರು, ಯುವಬರಹಗಾರರ ವೇದಿಕೆಯ ಮೂಲಕ ಸಕ್ರಿಯರಾಗಿದ್ದು, ಸಮಕಾಲೀನ ವಿದ್ಯಮಾನಗಳಿಗೆ ಕವಿತೆಗಳ ಮೂಲಕ ಸ್ಪಂದಿಸುವಿಕೆಗೆ ಗುರುತಾಗಿದ್ದಾರೆ. == ಕೃತಿಗಳು == === ಕವನಸಂಕಲನಗಳು === ಜೀವನ್ಮುಖಿ ಹೊಳೆ ಜಂಗಮನ ಜೋಳಿಗೆ ಸಂಜೆಮಳೆ ಗಾಳಿಪಟ ಕುಹೂ ಕುಹೂ ಕೋಗಿಲೆ ದಿವ್ಯ ದೀವಿಗೆ ಬಯಲ ಬೆಳಕಿಗೆ ಬಾಗಿ === ಸಂಪಾದನೆ === ಕಾವ್ಯಸಿರಿ ಸೇವಾಚೇತನ ವಿಜ್ಞಾನ ಪಥಿಕ == ಪುರಸ್ಕಾರಗಳು == ಶಿಕ್ಷಣ ಚೇತನ ಪ್ರಶಸ್ತಿ ಕುವೆಂಪು ಸಾಹಿತ್ಯ ಪ್ರಶಸ್ತಿ ಜಿ. ಪಿ. ರಾಜರತ್ನಂ ಸಾಹಿತ್ಯ ಪ್ರಶಸ್ತಿ ಕನ್ನಡ ಸಾಹಿತ್ಯ ಪರಿಷತ್ತು - ಅರಳು ಸಾಹಿತ್ಯ ಪ್ರಶಸ್ತಿ ಎಸ್. ಕೆ. ಕರೀಂಖಾನ್ ಸಾಂಸ್ಕೃತಿಕ ಮತ್ತು ಸಾಹಿತ್ಯ ಪ್ರಶಸ್ತಿ ರೋಟರಿ ಆದರ್ಶ ಶಿಕ್ಷಕ ಪ್ರಶಸ್ತಿ ಗಾಂಧಿ-ವಿವೇಕಾನಂದ ಸದ್ಭಾವನಾ ಪ್ರಶಸ್ತಿ == ಉಲ್ಲೇಖಗಳು ==